ಹಯಗ್ರೀವ ಮಾಧವ ದೇವಾಲಯವು ಮೋನಿಕೂಟ್ ಗುಡ್ಡದ ಮೇಲೆ ಸ್ಥಿತವಾಗಿದೆ. ಗುಡ್ಡವು ಭಾರತದ ಅಸ್ಸಾಂ ರಾಜ್ಯದ ಕಾಮ್ರೂಪ್ ಜಿಲ್ಲೆಯ ಹಾಜೊದಲ್ಲಿ ಸ್ಥಿತವಾಗಿದೆ, ಗುವಾಹಾಟಿಯ ಪಶ್ಚಿಮಕ್ಕೆ ಸುಮಾರು ೩೦ ಕಿ.ಮಿ. ದೂರದಲ್ಲಿ. ಕ್ರಿ.ಶ. ೧೧ನೇ ಶತಮಾನದಲ್ಲಿ ಕಾಮರೂಪದಲ್ಲಿ ರಚಿಸಲಾದ ಕಾಲಿಕಾ ಪುರಾಣವು ವಿಷ್ಣುವಿನ ಈ ರೂಪದ ಮೂಲ ಮತ್ತು ಮೋನಿಕೂಟ್ ಗುಡ್ಡದಲ್ಲಿ ಅವನ ಅಂತಿಮ ಪ್ರತಿಷ್ಠಾಪನೆ ಬಗ್ಗೆ ಮಾತನಾಡುತ್ತದೆ. ಅಲ್ಲೇ ಈಗಿನ ದೇವಾಲಯವು ಸ್ಥಿತವಾಗಿದೆ. ಈಗಿನ ದೇವಾಲಯದ ರಚನೆಯನ್ನು ರಾಜ ರಘುದೇವ ನಾರಾಯಣನು ೧೫೮೩ರಲ್ಲಿ ನಿರ್ಮಿಸಿದನು. ಕೆಲವು ಇತಿಹಾಸಕಾರರ ಪ್ರಕಾರ ಪಾಲ ರಾಜವಂಶದ ರಾಜನು ಇದನ್ನು ೧೦ನೇ ಶತಮಾನದಲ್ಲಿ ನಿರ್ಮಿಸಿದನು. ಇದು ಕಲ್ಲಿನ ದೇವಾಲಯವಾಗಿದ್ದು ಹಯಗ್ರೀವ ಮಾಧವನ ಒಂದು ವಿಗ್ರಹವನ್ನು ಹೊಂದಿದೆ. ಈ ಭವ್ಯವಾದ ದೇವಾಲಯದಲ್ಲಿ ವಿಷ್ಣು ಪ್ರಧಾನ ದೇವತೆಯಾಗಿದ್ದಾನೆ. ಇವನ ವಿಗ್ರಹವು ಕಪ್ಪುಶಿಲೆಯದ್ದಾಗಿದ್ದು ಗರ್ಭಗೃಹದಲ್ಲಿ ಪೂಜಿಸಲ್ಪಡುತ್ತದೆ. == ಉಲ್ಲೇಖಗಳು ==